ವೆಂಕಟರಾಜ ಪಾನಸೆ ಇವರು ೧೯೩೧ರಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗಂದಿಗವಾಡ ಗ್ರಾಮದಲ್ಲಿ ಜನಿಸಿದರು. ಬಡತನದಿಂದಾಗಿ ಹೆಚ್ಚಿಗೆ ಒದಲಾರದೆ, ಮ್ಯಾಟ್ರಿಕ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ವೃತ್ತಿ ಜೀವನ ಪ್ರಾರಂಭಿಸಿದರು. ಇವರು 'ಬೆಳಗಾವಿ: ಕನ್ನಡಿಗರ ಸತ್ವಪರೀಕ್ಷೆ' ಎಂಬ ಪುಸ್ತಕವನ್ನು ಬರೆದಿರುವರು. == ಪತ್ರಿಕೋದ್ಯಮ == ಇವರು ಮೊದಲು ರೈತ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ ಬಳಿಕ, ಚಿತ್ರಗುಪ್ತದಲ್ಲಿ ಸಹಸಂಪಾದಕರಾಗಿ ಕೆಲಕಾಲ ದುಡಿದರು.ಆನಂತರ ಜನಶಕ್ತಿಯ ಸಂಪಾದಕರಾದರು. ಕೆಲಕಾಲ ಚೆನ್ನೈದಲ್ಲಿರುವ ಸೋವಿಯೆಟ್ ಒಕ್ಕೂಟದ (ಈಗ ರಶಿಯಾ)ದ ಸಮಾಚಾರ ಇಲಾಖೆಯಲ್ಲಿ ಕನ್ನಡ ವಿಭಾಗದ ಸಂಪಾದಕರಾಗಿದ್ದರು. == ಸಾಹಿತ್ಯ == === ಕಥಾಸಂಕಲನ === ಮನ್ಮಥನ ಹೆಂಡತಿ ಇದು ಬರೆಯುವಂಥದಲ್ಲ === ಸಂಪಾದನೆ === ವಿಶ್ವಕಥಾಕೋಶದ ೫ನೆಯ ಸಂಪುಟ == ಇವುಗಳನ್ನೂ ನೋಡಿ == ಹೆಚ್.ಆರ್.ನಾಗೇಶರಾವ್ ನಿರಂಜನ ಎಂ.ಎಸ್.ಭಾರದ್ವಾಜ್